ಎಲ್ಲಿಯ ಯೋಗ ವಾಸಿಷ್ಠವೋ, ಎಲ್ಲಿಯ ಕ್ವಾಂಟಂ ಥಿಯರಿಯೋ?
ಒಂದರಲ್ಲಿರುವುದನ್ನೇ ಇನ್ನೊಂದರಲ್ಲಿ ಹೇಳುತ್ತಾರೆ. Multiverse ಇರಬಹುದು ಅಥವಾ ದೃಷ್ಟಿ ಸೃಷ್ಟಿ ವಾದ ಇರಬಹುದು ಬಹಳ ಸ್ಪಷ್ಟ ಹಾಗೂ ಸರಳ. ಯೋಗ ವಸಿಷ್ಠ ಜಗತ್ತು ಮಿಥ್ಯ, ಮಾಯೇ ಎನ್ನುತ್ತೆ. ಅದನ್ನೇ ಕ್ವಾಂಟಂ ಮೆಕ್ಯಾನಿಕ್ಸ್ ಹೇಳ್ತಾ ಇದೇ. ಯೋಗ ವಸಿಷ್ಠ ಅರಿವು ಆಸೆಗೆ ಸರಿಯಾದ ಭ್ರಮೆ ಸೃಷ್ಟಿಸುತ್ತದೆ ಎನ್ನುತ್ತೆ. ಹಾಗಾದರೆ ಈ 3D ಎನ್ನುವ ನಮ್ಮ ಸುತ್ತಲಿನ ಜಗತ್ತು ಸುಳ್ಳೇ? ಭ್ರಮೆಯೇ? ನಮ್ಮ ಮನಸ್ಸಿನ ಆಸೆಗೆ ನಾವೇ ತೋರಿಸಿಕೊಳ್ಳುವ ಕನಸೇ ? ಏನು ಇದು. ನಾನು ಎನ್ನುವುದೇ ಒಂದು ಗುರುತಿಲ್ಲದ ಶಕ್ತಿಯೇ?
ಕ್ವಾಂಟಂ ಥಿಯರಿ ಸೂಕ್ಷ್ಮ ಶರೀರಕ್ಕೆ Field ಎನ್ನುತ್ತದೆ. ಅದು ಶರೀರದ ಒಳಗೂ, ಹೊರಗೂ ಇದೆ ಅನ್ನುತ್ತದೆ. Memory ಗೆ brain ಬೇಕಾಗಿಲ್ಲ ಅದು ಶರೀರದ ಎಲ್ಲ ಕಡೆಯೂ ಇರಲು ಸಾಧ್ಯ ಅನ್ನುತ್ತದೆ. ಈ memory ಅನ್ನು ಯೋಗ ವಾಸಿಷ್ಠ ವಾಸನೆಗಳು ಅನ್ನುತ್ತದೆ. ಅದು ಜನ್ಮಾಂತರಗಳಲ್ಲಿ ಮುಂದುವರೆಯುತ್ತದೆ ಎನ್ನುತ್ತದೆ.
ಕಾಕಾ ಬುಷುಂಡಿ 7 ಬಾರಿ ರಾಮಾಯಣವನ್ನು ಬೇರೆ ಬೇರೆ ರೀತಿ ಯಾಗಿ ಬೇರೆ ಬೇರೆ ವಿಶ್ವಗಳಲ್ಲಿ ಒಂದೇ samayakke ನೋಡಿದ ಯೋಗ ವಸಿಷ್ಠ ಹೇಳುತ್ತದೆ. ಇದನ್ನೇ parallel universe ಅಂತ ಕ್ವಾಂಟಂ ಅಧ್ಯಯನ ಇನ್ನೂ ನಡೆಸುತ್ತಾ ಇದೆ. ಇದನ್ನು ಗಣಿತಾತ್ಮಕವಾಗಿ ಪ್ರಮಾಣ ಮಾಡಿದೆ ಕ್ವಾಂಟಂ ಥಿಯರಿ. ಎಲ್ಲವೂ ಒಂದೇ consciousness ನಾ ರೂಪಾಂತರ ಅನ್ನುತ್ತೆ ಕ್ವಾಂಟಂ ಥಿಯರಿ. ಏಕಂ ಬ್ರಹ್ಮ ಅನ್ನುತ್ತೆ ಯೋಗ ವಾಸಿಷ್ಠ.
Time -space is relative ಅನ್ನುತ್ತೆ ಕ್ವಾಂಟಂ ಥಿಯರಿ. ಯೋಗ ವಸಿಷ್ಠ ಅನ್ನುತ್ತೆ ಸಮಯವು ವಿಶ್ವಗಳಿಂದ ವಿಶ್ವಕ್ಕೆ ಬೇರೆ ಬೇರೆಯೇ ಆಗಿ ಬದಲಾಗುತ್ತದೆ ಎನ್ನುತ್ತೆ. ಭೂತ, ವರ್ತಮಾನ, ಭವಿಷ್ಯತ್ ಎಲ್ಲವೂ ಏಕಕಾಲದಲ್ಲಿ ಯ ಸ್ಥಿತಿಗಳು ಅನ್ನುತ್ತೆ ಯೋಗ ವಸಿಷ್ಠ!!!
ಎಲ್ಲವೂ ಮುಂದಿನ ಪೀಳಿಗೆಗೆ ಸ್ಪಷ್ಟವಾಗಲಿದೆ. !! ಇದರ ಬಗ್ಗೆ ಇನ್ನಷ್ಟು ಮುಂದೆ ಬರೆಯುತ್ತಿರುತ್ತೇನೆ.

No comments:
Post a Comment